ಶುಭಾಷಯ
ಶುಭಾಷಯ
ಬದಿಗಿಟ್ಟು ಬಿಡಿ,
ಹೂವನರಳಿಸುವುದು ರಾತ್ರಿ
ವಂದನೆ ಸಲ್ಲುವುದು ಮಾತ್ರ ಹಗಲಿಗೆ
ಹಳತು ಹರಿದು ಹೋಗಲಿ
ಹೊಸತು ಹಂಚಿ ಹೊಳೆಯಲಿ
ಸದಾ ಮಿಂಚುತಿರಲಿ ಪ್ರೀತಿ
ಇಂಚು ಇಂಚಲಿ
ಪರೀಕ್ಷೆಗಳು ಇದ್ದೇ ಇವೆ.
ಜೊತೆಗಿರಲಿ ನಿರೀಕ್ಷೆ
ಮರಳಲಿರಲಿ ನಿಂದನೆ
ಕಲ್ಲಲಿರಲಿ ವಂದನೆ
ನಿನ್ನೆ ಇಂದು ನಾಳೆಗೆ
ಸದಾ ಹರ್ಷ ಬಾಳಿಗೆ
ಹೊಸೆತ ಹೊಸೆವ
ಹೊಸ್ತಿಲಲಿ ನವ
ನಗುವದು ಕಾಣಲಿ.
ಕೃತಜ್ಞತೆ ನಿನ್ನೆಗೆ.
ಶುಭಾಷಯವು ನಾಳೆಗೆ
ಅಭಿನಂದನೆ ಇಂದಿಗೆ
Posted on February 24, 2012, in Uncategorized. Bookmark the permalink. Leave a Comment.
Leave a Comment
Comments (0)