ಅವ್ರೊಂತರಾ ಮಂತ್ಲಿ ಪಾಸ್ನೋರು,

ಅರೆ…ಯಾರ್ ಅದೆಷ್ಟೋ ಜನ್ರನ್ನ ನೋಡಿದ್ದೀನಿ ಅವ್ರೊಂತರಾ ಮಂತ್ಲಿ ಪಾಸ್ನೋರು, ನಿಮ್ಗೊತ್ತಲ್ವಾ ಮಂತ್ಲೀ ಪಾಸ್ ಅಂದ್ರೆ, ಬೆಂಗ್ಳೂರು ಬಿಎಂಟಿಸಿ ಮಂತ್ಲಿ ಪಾಸಿದ್ದಂಗೆ ಮಂತಿ(ಕಿ)ಗೊಂದು ಮನಸು, ಎಲ್ಲಿ ಯಾವಾಗ ಹೆಂಗ್ಹೆಂಗೆ ಉಲ್ಟಾ ಹೊಡೀತಾರೋ ಗೊತ್ತಿಲ್ಲ. ಯಾವ್ ರೂಟು ಯಾವ್ ಬಸ್ಸು ಯಾವ್ ಕಂಡೆಕ್ಟ್ರೂ ಕೇಳಲ್ಲ, ಆನೆ ನಡೆದಿದ್ದೆ ದಾರಿ ಅಂತಾರಲ್ಲ ಸಾರಿ ಸಾರಿ ಹಂಗಲ್ಲ ಕೋತಿ ಹಾರಿದ್ದೆ ಮರ ಅಂದಹಾಗೆ. ಬೈದಬೈ ನಾನ್ಹೇಳ್ತಿರೋದು “ಅವ್ರ” ಬಗ್ಗೆ, ಪಾಪ ನಾವೇ ಒಳ್ಳೇವ್ರು ಕಂಡ್ರಿ ಆ ದೇವ್ರು ಅದೇನು ಅಂತ ಜನ್ಮ ಕೊಟ್ಬಿಟ್ನೋ, ಆಕಡೆ, ಅತ್ರ ಅವ್ರಿಗೆ ನೋವಾಗುತ್ತೇನೋ ಅಂತ ಕಿತ್ತು ಬರೋ ಕರುಳನ್ನೆ ನುಂಗ್ತಿವಿ, ಈಕಡೆ, ನಕ್ರೆ ಇವ್ರಿಗೆ ನೋವಾಗುತ್ತೇನೋ ಅಂತ ಅಳ್ತಿವಿ..

ಚೇಂಜ್ ಇಷ್ಟೇ.., ಅಲ್ಲಿ ನೋವನ್ನು ಮರೆತು ನಗ್ತೀವಿ. ಇಲ್ಲಿ ಮರೆತ ನೋವನ್ನ ಅಳ್ತೀವಿ ಎರಡೂ ಕಡೆ ಆಕ್ಟಿಂಗು.. ಅದೇನೋ ಅರ್ಥ ಆಗಲ್ಲ ಸಾರ್ ನಾನು ಲೈಫಲ್ಲಿ ಸಕತ್ ಕಲಾವಿದ ಆಗ್ಬೇಕು ಅಂತ ಕನಸು ಕಾಣೋನು ಆದ್ರೆ ನಂಗೆ ಆಕ್ಟಿಂಗ್ ಅಂದ್ರೆ ಬಿಲ್ಕುಲ್ ಒಪ್ಪಲ್ಲ. ಆದ್ರೆ ಇದೆರಡನ್ನೂ ಮಾಡೋದ್ರಲ್ಲಿ ಅವ್ರು ಬಲೇ ಚತ್ರಿ( ಚತುರಿ)ಗಳು. ಅದೇ ಮೊದ್ಲೇ ಹೇಳಿದ್ನಲ್ಲ ಹಂಗೆ ಇವ್ರಿಗೆ ರೂಟೇ ಇಲ್ಲ, ಆದ್ರೆ ನಮ್ದು ಹೇಳ್ಲೇ ಇಲ್ಲ ಅಲ್ವಾ! ನಮ್ದು ಈಯರ್ ಪಾಸ್ ಒಂದು ವರ್ಷ ಇಡೀ ಒಂದೇ ರೂಟು ಅಲ್ಲೇ ಹತ್ತೊದು ಅಲ್ಲೇ ಇಳಿಯೋದು. ಹಾಗಂತ ನಾವೇನು ಬಹಳಾ ಸಿನ್ಸಿಯರ್ ಅನ್ಕೊಂಡ್ರೆ ಅದೂ ತಪ್ಪೆ.. ಆಗಾಗ ನಾವೂ ಬೇಲಿ ಮುರಿದು ಗೂಳಿಯಾಗೋದು, ಘೀಳಿಡೋದೂ ಉಂಟು, ಏನೇ ಮೆಯ್ದ್ರೂ ನಾವೇ ಅವ್ರಿಗಿಂತ ಓಕೆ.. ಆದ್ರೆ ನಮ್ ಹಿರಿಯರಿಗೆ ಬುದ್ದೀನೇ ಇಲ್ಲಪ್ಪ ನಮ್ಮ ಮೂಗ್ದಾರ ಕೈಯಲ್ಲಿ ಹಿಡ್ಕೊಂಡು ಕಾಡಿಸ್ತಾರೆ. ಅವ್ರನ್ನ ಏನೂ ಮಾಡ್ದೇ ಇರೋ ಮುಗ್ದರು ಅಂತ ನಂಬಿ ಆಮೇ..ಲೆ ಎಡವಟ್ಟಾದ ನಾವೇ ಮೂಡರು ಅಂತ ಪೆಕರು ಪೆಕರಾಗಿ ಸುಮ್ಮನಾಗಿಬಿಡ್ತಾರೆ. ಇವೆಲ್ಲ ನಮ್ಮೊಳಗೇ ನಡೀತಾ ಇದ್ರೂ ನಮ್ಗೇ ಗೊತ್ತಿರೊಲ್ಲ ಅಲ್ವಾ ಫ್ರೆಂಡ್ಸ್…

ಅಂದಹಾಗೆ ಮಂತ್ ಮುಗೀತಾ ಇದೆ, ಮಂತ್ಲಿ ಪಾಸ್ ತೊಗೋಬೇಕು. ತಪ್ ತಿಳ್ಕೋಬೇಡ್ರಿ ನಾನು ಗಂಡ್ ಹುಡುಗ.. ಅದೂ ಕೃಷ್ಣ ಸುಂದರ, ನಮ್ಗೆಲ್ಲ ಯಾರ್ ರೀ ಬೇರೆ ರೂಟ್ ತೋರಿಸ್ತಾರೆ.. ಮೊದ್ಲೇ ನಮ್ಗೆ ಆಕ್ಟಿಂಗ್ ಬರಲ್ಲ, ನಮ್ದೇನಿದ್ರೂ ಒಂದೇ ರೂಟು ಯಶವಂತಪುರದಿಂದ ತೋಟದಗುಡ್ಡದಹಳ್ಳಿಗೆ..

…………ಜೀವನರಸಿಕ…………

About jeevanarasika

i love everyone and everything, that too free of cost, its my ultimate attitude. i love me , i have many friends but, god is my best friend.... i love my country, i love nanna preethiya kannada.., i am a creative guy, positive guy, lovly and lively charecter, i love my job, and ultimately i love my sakaleshpur, appa and amma they are beyond my love.. jeevanarasika................

Posted on February 23, 2012, in Uncategorized. Bookmark the permalink. Leave a Comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.